Sunday 1 December 2013

ಪ್ರಾರ್ಥನೆಯ ವಿಧಗಳು





ಪ್ರಾರ್ಥನೆಯಲ್ಲಿ ಅನೇಕ ವಿಧಗಳುಂಟು  ಅದರಲ್ಲಿ ಪ್ರಾಮುಖ್ಯವಾದದ್ದು
1. ವೈಯಕ್ತಿಕ ಪ್ರಾರ್ಥನೆ - ದೇವರೊಂದಿಗೆ ಸಂಭಾಷಿಸುವದು (ವಿಮೋಚನಕಾಂಡ 33:11)
ಸಾಮಾನ್ಯವಾಗಿ ಸಂಭಾಷಣೆಯೆಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡುವದು ಅಥವಾ ವಿಷಯಗಳನ್ನು ಹಂಚಿಕೊಳ್ಳುವದೆಂಬದು ಎಲ್ಲರಿಗೂ ತಿಳಿದ ಸಾಮಾನ್ಯ ಸಂಗತಿಯಾಗಿದೆ, ಆದರೆ ಪ್ರಾರ್ಥನೆ ಮಾಡುವ ಕ್ರೈಸ್ತರು ಇದನ್ನು ಮರೆತಂತಿದೆ, ಕೇವಲ ನಮಗೇನು ಬೇಕು, ನಮ್ಮ ಇಷ್ಟವೇನು - ನಮ್ಮ ಕಷ್ಟವೇನು ಎಂಬ ಸ್ವಹಿತ ಆಧಾರಿತ ಮನವಿಗಳನ್ನು ಆತನ ಬಳಿ ಸುರಿದು ನಮ್ಮನ್ನು ನಾವು ಹಗುರ ಮಾಡಿಕೊಳ್ಳುವದು ಪ್ರಾರ್ಥನೆಯಲ್ಲ!  ಬದಲಾಗಿ ನಮ್ಮ  ಅಗತ್ಯತೆಗಳಿಗೆ ಮತ್ತು ನಮ್ಮ ಸಮಸ್ಯೆಗಳಿಗೆ ದೇವರ ಉತ್ತರವೇನು ಎಂಬದನ್ನು ಕೇಳಿ ತಿಳಿದು ಕೊಳ್ಳುವದೂ ಆತನ ಸ್ವರವನ್ನು ಕೇಳುವದು ಆತನ ಹೃದಯದ ಭಾರವನ್ನು ಅರಿತುಕೊಳ್ಳುವದೇ ಪ್ರಾರ್ಥನೆಯ ಕೇಂದ್ರ ಬಿಂದುವಾಗಿದೆ! (ಆದಿಕಾಂಡ 18:17-19)

2.ವಿಜ್ಞಾಪನೆ.
"ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ....ಮಾಡಬೇಕು....ಹಾಗೆಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ." (1ತಿಮೊಥೆಯನಿಗೆ 2:1-4) ಎಲ್ಲಾ ಮನುಷ್ಯರೂ ರಕ್ಷಣೆ ಹೊಂದಲು ಬರೀ ಸುವಾರ್ತೆ ಸಾರಿದರೆ ಪ್ರಯೋಜನವಿಲ್ಲ! ಮೊದಲು ದೇವರ ಬಳಿ ಕರುಣೆಗಾಗಿ ಬೇಡಿ ಕೃಪೆಯ ಅವಧಿ ವಿಸ್ತರಿಸುವಂತೆ ವಿಜ್ಞಾಪನೆ ಮಾಡಿ (ಯೋಹಾನ 6:65, 1ತಿಮೊಥೆಯನಿಗೆ 2:1)
ನಂತರ ಬಲಿಷ್ಠನನ್ನು ಕಟ್ಟಿಹಾಕಬೇಕಾದದ್ದು ಅತ್ಯಾವಶ್ಯ (ಮತ್ತಾಯ 12:29) ನಂತರವೇ ಸವಾರ್ತೆಯು ಫಲಭರಿತವಾಗುವುದು. 
ಹೇಗೆ ಭೂಮಿಯನ್ನು ಮೊದಲು ಶುಚಿಮಾಡಿ ಹದಗೊಳಿಸಿ ನಂತರ ಬೀಜ ಬಿತ್ತಿದರೆ 80%ರಷ್ಟಾಗಲಿ 100%ರಷ್ಟಾಗಲಿ ಫಲಕೊಡುತ್ತದೋ ಹಾಗೆಯೇ ಸುವಾರ್ತೆಯ ಬೀಜ ಬಿತ್ತುವ ಮೊದಲು ಶುದ್ಧೀಕರಣದ ಅಗತ್ಯವಿದೆ! (ಲೂಕ 8:11)
ಇದನ್ನು ಆತ್ಮೀಕ ಯುದ್ಧ ಎಂಬುದಾಗಿ ಕರೆಯುತ್ತೇವೆ. ಈ ಆತ್ಮೀಯ ಯುದ್ಧದ ತಂತ್ರೋಪಾಯಗಳಿಗಾಗಿ 
ನಮ್ಮ  samruddhakarnataka.blogspot.in   ಬ್ಲಾಗ್  ನೋಡಿ.

No comments:

Post a Comment