ಕರುಣಾನಿಧಿಯಾದ ದೇವರೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ!
ನನ್ನ ಪ್ರಾಣ, ಆತ್ಮೆ, ಶರೀರಗಳನ್ನು ನಿನ್ನ ಸನ್ನಿಧಿಯಲ್ಲಿ ಸಮರ್ಪಿಸುತ್ತೇನೆ, ನನ್ನ ಶರೀರದ ಆರೋಗ್ಯಕ್ಕಾಗಿ ಬೇಡಿಕೊಳ್ಳುತ್ತೇನೆ! ದೇವರೇ, ವ್ಯಾಧಿಗೆ ಕಾರಣವಾದದ್ದು ನನ್ನಲ್ಲಿರುವುದಾದರೆ ನನ್ನನು ಕ್ಷಮಿಸು, ನನ್ನ ಅಪರಾಧಗಳನ್ನು ಮನ್ನಿಸು! ನನ್ನ ಶರೀರದಲ್ಲಿ ಬಲವನ್ನೂ ಮನಸ್ಸಿನಲ್ಲಿ ನವಚೈತನ್ಯವನ್ನೂ ಅನುಗ್ರಹಿಸು! ನಾನು ಜೀವದಿಂದಿದ್ದು ನಿನ್ನ ನಾಮವನ್ನು ಪ್ರಖ್ಯಾತಿಪಡಿಸುವಂತೆ ಕರುಣಿಸು!
ವ್ಯಾಧಿಯನ್ನೂ, ಬಲಹೀನತೆಯನ್ನೂ ತಿರಸ್ಕರಿಸುತ್ತೇನೆ! ವ್ಯಾಧಿಗೆ ನನ್ನಲ್ಲಿ ಸ್ಥಳವಿಲ್ಲ! ಈ ಶರೀರವು ಕ್ರಿಸ್ತಯೇಸುವಿನ ರಕ್ತದಿಂದ ಕ್ರಯಕ್ಕೆ ಕೊಳ್ಳಲ್ಪಟ್ಟಿರುವುದರಿಂದ ಬಲಹೀನತೆಗೆ ನನ್ನ ಶರೀರದ ಮೇಲೆ ಅಧಿಕಾರವಿಲ್ಲ! ಯೇಸುವಿನ ಗಾಯದಿಂದ ನಾನು ಗುಣವಾಗಿದ್ದೇನೆ! ವ್ಯಾಧಿಯು ನನ್ನದಲ್ಲ, ಬಲಹೀನತೆಯು ನನ್ನದಲ್ಲ, ಆರೋಗ್ಯವೂ, ಬಲವೂ ನನ್ನದು! ನನ್ನ ಕರ್ತನಾದ ಯೇಸುವೇ, ನನ್ನನ್ನು ಗುಣಪಡಿಸಿದ ನಿನ್ನ ಗಾಯಗಳಿಗಾಗಿ ನಿನಗೆ ವಂದನೆ, ಯೇಸುವಿನ ನಾಮದಲ್ಲಿ ಆರೋಗ್ಯವನ್ನೂ, ಬಲವನ್ನೂ ಹೊಂದಿಕೊಳ್ಳುತ್ತೇನೆ, ಆಮೇನ್!
"ಆತನು(ಯೇಸು) ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು"(1 ಪೇತ್ರನು 2:24)
ಮುಂದುವರಿಯುವುದು...,
ಆಮೆನ್!
ReplyDelete