"ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ
ಮೋಟುಗೈಯಲ್ಲ"
ಯೆಶಾಯ 59:1
ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ಯೇಸುವೇ, ನಮ್ಮ ಕುಟುಂಬದ ಸದಸ್ಯರೆಲ್ಲರನ್ನೂ ನಿನ್ನ ಕೃಪೆಯ ಹಸ್ತದಲ್ಲಿ ಒಪ್ಪಿಸಿಕೊಡುತ್ತೇನೆ, ಕುಟುಂಬದಲ್ಲಿರುವ ಪ್ರತಿಯೊಬ್ಬರನ್ನೂ ರಕ್ಷಿಸುವಂತೆ ಪ್ರಾರ್ಥಿಸುತ್ತೇನೆ, ನಿನ್ನ ಅಮೂಲ್ಯವಾದ ರಕ್ಷಣೆಯನ್ನು ನನಗೆ ಅನುಗ್ರಹಿಸಿದಿಯಲ್ಲಾ! ಎಲ್ಲಾ ಮನುಷ್ಯರೂ ರಕ್ಷಿಸಲ್ಪಡುವದು ನಿನ್ನ ಚಿತ್ತವಾಗಿರುವದರಿಂದ ನನ್ನ ಕುಟುಂಬವನ್ನೂ ರಕ್ಷಿಸು. "ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೇ ಹೊಂದುವಿ ನಿನ್ನ ಮನೆಯವರೂ ರಕ್ಷಣೇಹೊಂದುವರು" ಎಂಬ ವಾಕ್ಯದ ಪ್ರಕಾರ ನನ್ನ ಕುಟುಂಬವನ್ನು ಕರುಣಿಸು! ರಕ್ಷಣೆಯನ್ನು ಅನುಗ್ರಹಿಸು! ಪಾಪಿಗಳನ್ನು ಹುಡುಕಿ ರಕ್ಷಿಸಲು ಬಂದಾತನೇ, ನೀನೇ ರಕ್ಷಕನೆಂದು ಅರಿತುಕೊಳ್ಳುವಂತೆ ನಮ್ಮ ಕುಟುಂಬದವರ ಮನೋನೇತ್ರಗಳನ್ನು ತೆರೆ, ಪಾಪಗಳು ಕ್ಷಮಿಸಲ್ಪಡಲು ಶಿಲುಬೆಯಲ್ಲಿ ರಕ್ತವನ್ನು ಸುರಿಸಿದಾತನೇ, ಇವರನ್ನು ಕ್ಷಮಿಸು, ಇವರ ಪಾಪಗಳಿಂದಲೂ, ಶಾಪಗಳಿಂದಲೂ ಬಿಡಿಸು, ನಿನ್ನನ್ನು ರಕ್ಷಣೆ ಹೊಂದದಂತೆ ತಡೆಮಾಡುವ ಸಕಲ ಅಡ್ಡಿಗಳು ಅವರ ಆಲೋಚನೆಗಳನ್ನೂ, ಶರೀರವನ್ನೂ, ಜೀವಿತವನ್ನೂ ಬಿಟ್ಟು ಹೊರಹೋಗಲಿ! ರಕ್ಷಣೆಯ ಸಂತೋಷವು ಅವರ ಹೃದಯದಲ್ಲಿ ಉಂಟಾಗಲು ಮಾರ್ಗಗಳು ತೆರೆಯಲ್ಪಡಲಿ! ಸೈತಾನನ ಸಿಂಹಾಸನಗಳು ಕೆಡವಲ್ಪಟ್ಟು ನಿನ್ನ ಪರಲೋಕ ರಾಜ್ಯವು ಅವರ ಹೃದಯದಲ್ಲಿ ಸ್ಥಾಪಿಸಲ್ಪಡಲಿ! ನಿನ್ನ ಚಿತ್ತ ಅವರ ಮುಖಾಂತರ ಈ ಭೂಮಿಯಲ್ಲಿ ಪರಿಪೂರ್ಣಗೊಳ್ಳಲಿ. ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿನಗೆ ವಂದನೆ. ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ಪರಲೋಕದ ತಂದೆಯೇ, ಆಮೇನ್!
ಮುಂದುವರಿಯುವುದು...,
No comments:
Post a Comment