ಮುಂಜಾನೆಯ ಕುಟುಂಬ ಪ್ರಾರ್ಥನೆ
"ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವದು; ಉದಯಕಾಲದಲ್ಲಿಯೇ ಪ್ರಾರ್ಥನೆಯನ್ನು ಸಮರ್ಪಿಸಿ ಸದುತ್ತರವನ್ನು ಎದುರು ನೋಡುತ್ತಿರುವೆನು" (ಕೀರ್ತನೆಗಳು5:3)
ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ದೇವರೇ, ಈ ಮುಂಜಾನೆ ವೇಳೆಯಲ್ಲಿ ನಾವು ಕುಟುಂಬವಾಗಿ ನಿನ್ನ ಸಮ್ಮುಖದಲ್ಲಿ ಬರಲು ನೀನು ಅನುಗ್ರಹಿಸಿದ ಕೃಪೆಗಾಗಿ ನಿನಗೆ ವಂದನೆ! ಕಳೆದ ದಿನವೆಲ್ಲಾ ನಮ್ಮ ಕುಟುಂಬದಲ್ಲಿರುವ ಎಲ್ಲರನ್ನೂ ಕಣ್ಮಣಿಯ ಹಾಗೆ ಕಾದು ನಮ್ಮ ಅನ್ನ, ಪಾನಗಳನ್ನು ಆಶೀರ್ವದಿಸಿ ಸಕಲ ವ್ಯಾಧಿಗಳಿಗೆ ನಮ್ಮನ್ನು ದೂರಮಾಡಿದ್ದಕ್ಕಾಗಿ ನಿನಗೆ ಸ್ತೋತ್ರ!
ನಮ್ಮ ಪ್ರರಿಶ್ರಮವನ್ನೂ, ದುಡಿಮೆಯನ್ನೂ ಆಶೀರ್ವದಿಸಿದ್ದಕ್ಕಾಗಿ ನಿನಗೆ ವಂದನೆ!
ದೇವರೇ, ನೀನು ದಯಪಾಲಿಸಿದ ಈ ನೂತನ ದಿನದಲ್ಲಿ ನಮ್ಮನ್ನು ಆಶೀರ್ವದಿಸಬೇಕಾಗಿ ಪ್ರಾರ್ಥಿಸುತ್ತೇವೆ. ಈ ದಿನ ಸಂಪೂರ್ಣವಾಗಿ ನಿನ್ನ ಆಳ್ವಿಕೆ ನಮ್ಮ ಮೇಲಿರಲಿ, ನಾವು ನಡೆಯಬೇಕಾದ ಮಾರ್ಗವನ್ನು ನಮಗೆ ಬೋಧಿಸು, ನಮ್ಮ ಕೆಲಸಕಾರ್ಯಗಳ ಮೇಲೆ ನಿನ್ನ ಹತೋಟಿಯಿರಲಿ, ನಮ್ಮ
ಪ್ರಯತ್ನಗಳನ್ನು ಆಶೀರ್ವದಿಸು.
ನಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಲು ಬೇಕಾದ ಜ್ಞಾನ, ವಿವೇಕಗಳನ್ನು ಅನುಗ್ರಹಿಸು, ಆರೋಗ್ಯವನ್ನೂ, ಬಲವನ್ನೂ ದಯಪಾಲಿಸು, ನಮ್ಮ ಮೇಲೂ ನಮ್ಮ ಪರಿವಾರದ ಮೇಲೂ ನಿನ್ನ ದೈವೀಕ ಕಾಪಾಡುವಿಕೆ ಉಂಟಾಗಲಿ! ಸೈತಾನನ ಕುತಂತ್ರಗಳು ಲಯವಾಗಲಿ, ನಿನ್ನ ಮುಖ ಪ್ರಸನ್ನತೆ ನಮ್ಮ ಮೇಲಿರಲಿ, ನಿನ್ನ ಸಮಾಧಾನದಿಂದ ನಮ್ಮ ಹೃದಯಗಳು ತುಂಬಿರಲಿ!
ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇವೆ ನಮ್ಮ ಪರಲೋಕದ ತಂದೆಯೇ, ಆಮೇನ್.
ಮುಂದುವರಿಯುವುದು...,
No comments:
Post a Comment